Menu

ಕೀರ್ತನೆಗಳು 122

OKCV

1 “ಯೆಹೋವ ದೇವರ ಆಲಯಕ್ಕೆ ಹೋಗೋಣ,” ಎಂದು ಜನರು ನನ್ನನ್ನು ಕರೆದಾಗ, ನನಗೆ ಸಂತೋಷವಾಯಿತು. 2 ಯೆರೂಸಲೇಮೇ, ನಮ್ಮ ಪಾದಗಳು ನಿನ್ನ ಬಾಗಿಲುಗಳಲ್ಲಿ ತಲುಪಿದೆ. 3 ಯೆರೂಸಲೇಮು, ಗಂಭೀರವಾಗಿಯೂ ಗಟ್ಟಿಯಾಗಿಯೂ ಕಟ್ಟಿರುವ ಪಟ್ಟಣವಾಗಿದೆ. 4 ಅಲ್ಲಿಗೆ ಗೋತ್ರಗಳು, ಯೆಹೋವ ದೇವರು ಇಸ್ರಾಯೇಲಿಗೆ ಕೊಟ್ಟ ಕಟ್ಟಳೆಗಳ ಪ್ರಕಾರ ಯೆಹೋವ ದೇವರ ಹೆಸರನ್ನು ಕೊಂಡಾಡುವುದಕ್ಕೆ ಗೋತ್ರಗಳು ಯಾತ್ರೆಯಾಗಿ ಬರುತ್ತಿದ್ದವು. 5 ಏಕೆಂದರೆ ಅಲ್ಲಿ ನ್ಯಾಯ ನಿರ್ಣಯಕ್ಕೆ ಸಿಂಹಾಸನಗಳೂ, ಅಂದರೆ, ದಾವೀದನ ಮನೆಯ ಸಿಂಹಾಸನಗಳೂ ಇರುತ್ತವೆ. 6 ಯೆರೂಸಲೇಮಿನ ಸಮಾಧಾನಕ್ಕಾಗಿ ಪ್ರಾರ್ಥನೆಮಾಡಿರಿ. “ಯೆರೂಸಲೇಮೇ, ನಿನ್ನನ್ನು ಪ್ರೀತಿಸುವವರಿಗೆ ಅಭಿವೃದ್ಧಿಯಾಗಲಿ. 7 ನಿನ್ನ ಪ್ರಾಕಾರದಲ್ಲಿ ಸಮಾಧಾನವಿರಲಿ, ನಿನ್ನ ಅರಮನೆಗಳಲ್ಲಿ ಅಭಿವೃದ್ಧಿಯೂ ಇರಲಿ." 8 ನನ್ನ ಸಹೋದರರ ನಿಮಿತ್ತವೂ ನನ್ನ ಸ್ನೇಹಿತರ ನಿಮಿತ್ತವೂ “ನಿನ್ನಲ್ಲಿ ಸಮಾಧಾನವಿರಲಿ,” ಎಂದು ಈಗ ಹೇಳುತ್ತೇನೆ. 9 ನಮ್ಮ ದೇವರಾದ ಯೆಹೋವ ದೇವರ ಆಲಯದ ನಿಮಿತ್ತ ನಿನಗೆ ಸಮೃದ್ಧಿಯಾಗಲಿ ಎಂದು ಹಾರೈಸುತ್ತೇನೆ.

Everything we make is available for free because of a generous community of supporters.

Donate