Menu

ಕೀರ್ತನೆಗಳು 93

OKCV

1 ಯೆಹೋವ ದೇವರು ಆಳಿಕೆ ಮಾಡುತ್ತಿದ್ದಾರೆ. ಘನತೆಯನ್ನು ಹೊದ್ದುಕೊಂಡಿದ್ದಾರೆ. ಬಲದಿಂದ ತಮ್ಮ ನಡುವನ್ನು ಕಟ್ಟಿಕೊಂಡಿದ್ದಾರೆ. ಆದುದರಿಂದ ಲೋಕವು ಸಹ ಸ್ಥಿರವಾಗಿದೆ, ಕದಲುವುದಿಲ್ಲ. 2 ದೇವರೇ, ನಿಮ್ಮ ಸಿಂಹಾಸನವು ಪೂರ್ವಕಾಲದಿಂದ ಸ್ಥಿರವಾಗಿದೆ. ಯುಗಯುಗದಿಂದ ನೀವು ಇದ್ದೀರಿ. 3 ಯೆಹೋವ ದೇವರೇ, ಸಮುದ್ರಗಳಲ್ಲಿ ಪ್ರವಾಹಗಳು ಮೊರೆಯುತ್ತಿವೆ. ಸಮುದ್ರಗಳು ತಮ್ಮ ಧ್ವನಿಯನ್ನು ಎತ್ತಿವೆ. ಸಮುದ್ರಗಳು ತಮ್ಮ ಅಲೆಗಳ ಘೋಷವನ್ನು ಎತ್ತಿವೆ. 4 ಮಹಾಸಾಗರದ ಶಬ್ದಕ್ಕಿಂತಲೂ, ಸಮುದ್ರದ ಬಲವಾದ ಅಲೆಗಳಿಗಿಂತಲೂ ಉನ್ನತದಲ್ಲಿರುವ ಯೆಹೋವ ದೇವರು ಬಲಿಷ್ಠರಾಗಿದ್ದಾರೆ. 5 ದೇವರೇ, ನಿಮ್ಮ ಶಾಸನಗಳು ಬಹಳ ನಿಶ್ಚಯವಾದವುಗಳು. ಯೆಹೋವ ದೇವರೇ, ಪರಿಶುದ್ಧತೆಯು ಸದಾಕಾಲ ನಿಮ್ಮ ಆಲಯವನ್ನು ಅಲಂಕರಿಸುತ್ತದೆ.

Everything we make is available for free because of a generous community of supporters.

Donate